ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩ ಕರ್ನಾಟಕ ಸರ್ಕಾರ ಆಗಸ್ಟ್ ೨ ೧೯೯೭ರಂದು ಬೆಂಗಳೂರಿನಲ್ಲಿ ಹೊರಡಿಸಿದ ಒಂದು ಪ್ರಕಟಣೆಯ ಭಾಗವಾಗಿತ್ತು ಮತ್ತು ಇದು ಕರ್ನಾಟಕದಲ್ಲಿ ಏಳು ಹೊಸ ಜಿಲ್ಲೆಗಳ ರಚನೆಯಾಗುವಲ್ಲಿ ಪರಿಣಮಿಸಿತು. ರಚನೆಯಾದ ಹೊಸ ಜಿಲ್ಲೆಗಳು ಚಾಮರಾಜನಗರ ಜಿಲ್ಲೆ ಮೈಸೂರು ಜಿಲ್ಲೆಯಿಂದ ದಾವಣಗೆರೆ ಜಿಲ್ಲೆ ಚಿತ್ರದುರ್ಗ, ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ಬಾಗಲಕೋಟೆ ಜಿಲ್ಲೆ ಬಿಜಾಪುರ ಜಿಲ್ಲೆಯಿಂದ ಗದಗ ಜಿಲ್ಲೆ ಮತ್ತು ಹಾವೇರಿ ಜಿಲ್ಲೆಗಳು ಧಾರವಾಡ ಜಿಲ್ಲೆಯಿಂದ ಉಡುಪಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆ ರಾಯಚೂರು ಜಿಲ್ಲೆಯಿಂದ ಪ್ರಕಟಣೆಯಿಂದಾಗಿ ಕರ್ನಾಟಕವು ೨೭ ಅಧಿಕೃತ ಜಿಲ್ಲೆಗಳಲ್ಲಿ ರಾಜಕೀಯವಾಗಿ ವಿಭಜಿತವಾಗುವಲ್ಲಿ ಪರಿಣಮಿಸಿತು.